ಕುಂದಗೋಳ; ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಶುದ್ದ ಕುಡಿಯುವ ನೀರಿನ ಘಟಕಗಳು ಒಂದು, ಅಂತದೇ ಒಂದು ಶುದ್ದ ನೀರಿನ ಘಟಕ ಗ್ರಾಮದಲ್ಲಿ ಪಾಳು ಬಿಳ್ಳುವ ಸ್ಥಿತಿಗೆ ತಲುಪಿದೆ. ಹರ್ಲಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಸ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನಿರ್ಮಾಸಿಲಾಗಿರುವ ಶುದ್ದ ನೀರಿನ ಘಟಕಗಳು ಕಾರ್ಯನಿರ್ವಹಸಿದೆ ಪಾಳು ಬಿಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಸರಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶುದ್ದ ನೀರಿನ ಘಟಕ ನಿರ್ಮಾಣ ಮಾಡಿದರು ಗ್ರಾಮ ಪಂಚಾಯಿತಿ ಆಡಳಿತ ವೈಖ್ಯರಿದಿಂದ ಪಾಳು ಬಿಳ್ಳುಲು ಪ್ರಾರಂಭವಾಗಿವಿ.

ಈಗಾಗಲೇ ಈ ಗ್ರಾಮದಲ್ಲಿ ಎರಡು ಶುದ್ದ ನೀರಿನ ಘಟಕಗಳು ಇದ್ದು ಒಂದು ಮಾತ್ರ ಕಾರ್ಯನಿರ್ವಹಿಸುತ್ತದೆ. ಇನ್ನೊಂದು ಸ್ಥಗಿತ ಗೊಂಡಿದೆ ಹಾಗಾದರೆ ಸರಕಾರಿ ಯೋಜನೆ ಅನುಷ್ಠಾನಕ್ಕೆ ಮಾತ್ರ ಕಾರ್ಯರೂಪಕ್ಕೆ ಇಲ್ಲದೆ ಇರುವುದು ಸ್ಥಳೀಯ ಮಟ್ಟದ ಅಧಿಕಾರಿಗಳು ಮುಜುಗರಕ್ಕೆ ಎಡೆ ಮಾಡಿ ಕೊಟ್ಟಂತಹ ಆಗಿದೆ.

ಇನ್ನೂ ಇಲ್ಲಿನ ಸಾರ್ವಜನಿಕರು ಒಂದಿಷ್ಟೂ ಜನ ಸುಲ್ತಾನಪೂರ ಗ್ರಾಮಕ್ಕೆ ತೆರಳಿ ಶುದ್ದ ನೀರು ತೆಗೆದುಕೊಂಡು ಬರ್ತಾ ಇದ್ದರೆ ಅಂತಾ ಇಲ್ಲಿನ ಗ್ರಾಮಸ್ಥರು ಮಾಹಿತಿ ನೀಡಿದರು ಇದರ ಜೊತೆಗೆ ಸರಕಾರ ಗ್ರಾಮ ಪಂಚಾಯಿತಿಗೆ ಸಾಕಷ್ಟು ಹಣ ಬಿಡುಗಡೆಗೊಳಿಸುತ್ತದೆ, ಆದರೆ ಗ್ರಾಮ ಪಂಚಾಯಿತಿ ಮುಂಬಾಗದಲ್ಲಿ ಬೋರ್ಡ್ ಇಲ್ಲ, ಹಾಗಾದರೆ ಇದು ಸರಕಾರಿ ಕಟ್ಟಡ ಅಥವಾ ಕೊಂಡವಾಡ? ಅಂತ ಒಂದು ಗೊತ್ತಿಲ್ಲ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ಕಾರ್ಯಾರಂಭ ಮಾಡಬೇಕೆಂದು ಇಲ್ಲಿ ಸಾರ್ವಜನಿಕರ ಆಗ್ರಹ ವಾಗಿದೆ.

ವರದಿ; ಶಾನು ಯಲಿಗಾರ

error: Content is protected !!