Latest

ಹೋಗಿದ್ದು ಪೊಲೀಸರ ಜೊತೆ; ಸಿಕ್ಕಿದ್ದು ಫುಟ್ಪಾತ್ ನಲ್ಲಿ ಹೆಣವಾಗಿ!

ಮಕ್ಕಳ ಕಳ್ಳರ ಬಗ್ಗೆ ಸಾಕಷ್ಟು ಜಿಲ್ಲೆಗಳಲ್ಲಿ ವದಂತಿ ಎದ್ದಿದ್ದು ಬೆಂಗಳೂರಿನಲ್ಲೂ ಸಹ ಇದು ಹಬ್ಬಿದೆ. ಕಳೆದ ತಿಂಗಳು ರಾಮ್ ಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಹೊತ್ತು ಓಡಾಡುತ್ತಿದ್ದ ಕುಡುಕನೋರವನಿಗೆ ಸ್ಥಳೀಯರೆಲ್ಲ ಸೇರಿ ಮಕ್ಕಳ ಕಳ್ಳನೆಂದು ಹಿಗ್ಗ ಮುಗ್ಗ ತಳಿಸಿರುತ್ತಾರೆ. ನಂತರ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿರುತ್ತಾರೆ.

ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ ಇದರ ಮುಂದುವರಿದ ಭಾಗವೇನೆಂದರೆ ಪೊಲೀಸರ ವಶಕ್ಕೆ ಒಪ್ಪಿಸಿದ ಮುಂದಿನ ದಿನ ಆತ ಫುಟ್ಬಾತ್ ನಲ್ಲಿ ಹೆಣವಾಗಿ ಪತ್ತೆಯಾಗಿದ್ದಾನೆ. ಸ್ಥಳೀಯರು ಆತನಿಗೆ ಹಿಗ್ಗ ಮುಗ್ಗ ತಳಿಸಿದ ನಂತರ ರಾಮ್ ಮೂರ್ತಿ ನಗರ ಪೊಲೀಸರ ಹೊಯ್ಸಳ ವಾಹನದೊಳಕ್ಕೆ ಹತ್ತಿಸಿರುವ ವಿಡಿಯೋ ಸ್ಥಳೀಯರು ಚಿತ್ರಿಸಿಕೊಂಡಿರುತ್ತಾರೆ. ಅಂದರೆ ಇಲ್ಲಿ ಸ್ಪಷ್ಟವಾಗುವುದೇನೆಂದರೆ ಆತನನ್ನು ಪೊಲೀಸರು ಕರೆದುಕೊಂಡು ಹೋಗಿರುತ್ತಾರೆ. ಪೊಲೀಸರ ವಾಹನದೊಳಕ್ಕೆ ಅವನೇ ನಡೆದುಕೊಂಡು ಹೋಗಿ ಹತ್ತಿರುತ್ತಾನೆ.

ಆಚಾರ್ಯ ವಿಚಾರವೇನೆಂದರೆ ಅವರು ಕರೆದುಕೊಂಡು ಹೋದ ಮುಂದಿನ ದಿನ ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫುಟ್ ಬಾತ್ ಒಂದರ ಮೇಲೆ ಅನಾಮ ದೇಹ ವ್ಯಕ್ತಿಯ ಹೆಣ ಸಿಕ್ಕಿರುತ್ತದೆ ಎಂದು ಪ್ರಕಟಣೆ ನೀಡಿರುತ್ತಾರೆ. ಅ ಹೆಣವು ರಾಮಮೂರ್ತಿ ನಗರ ಪೊಲೀಸರು ಕರೆದುಕೊಂಡು ಹೋಗಿದ್ದಂತವನದ್ದೇ ಆಗಿರುತ್ತದೆ. ಪೊಲೀಸರು ಹೇಳುವ ಪ್ರಕಾರ ಅವನು ಮಕ್ಕಳ ಕಳ್ಳನಲ್ಲ ಕುಡಿದು ಓಡಾಡುತ್ತಿದ್ದ, ಸ್ಥಳೀಯರು ತಪ್ಪಾಗಿ ತಿಳಿದು ಹೊಡೆದಿದ್ದರೂ ಅದಕ್ಕಾಗಿ ಅವನನ್ನು ಬಿಟ್ಟು ಕಳುಹಿಸಿದ್ದೇವೆ ಎಂದು ಹೇಳಿರುತ್ತಾರೆ. ಯಾವುದಾದರೂ ಅನಾಮದೇಯ ಹೆಣ ಸಿಕ್ಕ ಬಳಿಕ ಪೊಲೀಸರು ಎಲ್ಲ ಪೊಲೀಸ್ ಠಾಣೆಗಳಿಗೂ ಮಾಹಿತಿ ನೀಡುತ್ತಾರೆ ಹಾಗೂ ಪ್ರಕಟಣೆಗಳನ್ನು ನೀಡುತ್ತಾರೆ.

ಹೀಗೆ ಮಾಹಿತಿ ನೀಡಿದ ನಂತರವೂ ಸಹ ಬೆಂಗಳೂರಿನಲ್ಲೇ ಇರುವಂತಹ ಮತ್ತೊಂದು ಠಾಣೆಯ ಪೊಲೀಸರಿಗೆ ತಲುಪಲಿಲ್ಲವ? ಅಥವಾ ಪೊಲೀಸರೇ ಈತನನ್ನು ಅನಾಮದೇಯ ವ್ಯಕ್ತಿಯ ಹೆಣವೆಂದು ಬಿಂಬಿಸಲು ಮುಂದಾದಾರ? ಈ ಎಲ್ಲಾ ಪ್ರಶ್ನೆಗಳು ಮೂಡಲು ಕಾರಣ ಒಂದಿದೆ ಅದೇನೆಂದರೆ ಇ ಘಟನೆ ನಡೆದು ಸುಮಾರು 14 ರಿಂದ 15 ದಿನಗಳು ಕಳೆದಿವೆ ಆದರೂ ಸಹ ಅಂದಿನ ದಿನ ಆತನನ್ನು ತಳಿಸಿದ ಸಾರ್ವಜನಿಕರನ್ನು ಸಹ ಪ್ರಶ್ನಿಸಿರುವುದಿಲ್ಲ ಹಾಗೂ ಕರೆದುಕೊಂಡ ಹೋದ ಪೊಲೀಸರ ವಿರುದ್ಧವು ಯಾವುದೇ ರೀತಿಯ ತನಿಖೆ ನಡೆದಿರುವುದಿಲ್ಲ. ಅಂದರೆ ಇಲ್ಲಿ ಪೊಲೀಸರು ಆತನದ್ದು ಅನಾಥ ಶವವೆಂದು ಬಿಂಬಿಸಲು ಮುಂದಾಗಿದ್ದಾರೆ ಎಂಬುದು ತಿಳಿಯುತ್ತದೆ.
ಕೆಲವು ದಿನಗಳ ಹಿಂದೆ ಸಾಮಾಜಿಕ ಹೋರಾಟಗಾರರು ಹಾಗೂ ಕೆಲವು ಸಂಘಟನೆಗಳು ಇದರ ವಿರುದ್ಧ ಧ್ವನಿ ಎತ್ತಿ ನ್ಯಾಯಕ್ಕಾಗಿ ಕೋರ್ಟಿನ ಮೊರೆ ಹೋದಂತಹ ಸಂದರ್ಭದಲ್ಲಿ ಪೊಲೀಸರು ಅಂದಿನ ದಿನ ಆತನಿಗೆ ತಳಿಸಿರುವಂತಹ ವ್ಯಕ್ತಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ಇಷ್ಟು ದಿನ ಪೊಲೀಸರು ಸುಮ್ಮನಿದ್ದು ಈ ರೀತಿ ದಿಡೀರನೆ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು. ಆ ದಿನ ಪೊಲೀಸರು ಆತನನ್ನು ಕರೆದುಕೊಂಡ ಹೋದ ಮೇಲೆ ಮಾಡಿದ್ದಾದರೂ ಏನು? ನಿಜಕ್ಕೂ ಆ ದಿನ ಸಾಯುವ ಹಾಗೆ ಒದೆ ತಿಂದವನನ್ನು ಪೊಲೀಸರು ಬಿಟ್ಟು ಕಳುಹಿಸಿದ್ದರಾ? ಸಾಯುವ ಸ್ಥಿತಿಯಲ್ಲಿ ಇದ್ದವನನ್ನು ಪೊಲೀಸರು ಆಸ್ಪತ್ರೆಗೆ ಏಕೆ ಸೇರಿಸಿರುವುದಿಲ್ಲ? ಪೊಲೀಸರಿಗೆ ಮನುಷ್ಯತ್ವ ಇಲ್ಲವಾ? ಅಥವಾ ಹಿಂದೆ ನಡೆದಿರುವ ಕಥೆಯೇ ಬೇರೆನಾ?
ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕರು ಸಿಗದಿದ್ದರೂ ಹೋದ ಅಮಾಯಕನ ಜೀವ ಹಿಂತಿರುಗಿ ಬರುವುದಿಲ್ಲ. ಸ್ಥಳೀಯ ಜನರ ಮುಂದೆ ತಮ್ಮ ಪೌರುಷವನ್ನು ತೋರಿಸಲು ಹೋಗಿ ಅಮಾಯಕನೋರವನಿಗೆ ತಳಿಸಿದ ಮೂವರು ಈಗ ಕೊಲೆಯ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದಾರೆ.
ನ್ಯಾಯಾಲಯದಲ್ಲಾದರೂ ಈ ಪ್ರಕರಣದ ಅಸಲಿ ಸತ್ಯ ಹೊರಬರುತ್ತದೆಯೋ ಅಥವಾ ಸಾಕಷ್ಟು ಪ್ರಕರಣಗಳಂತೆ ಇದು ಸಹ ಮೂಲೆಗುಂಪಾಗುತ್ತದೆಯೋ ಕಾದು ನೋಡಬೇಕು.

kiran

Recent Posts

ಪತ್ನಿಯ ಶೀಲ ಶಂಕಿಸಿ ಶೆಡ್ ನಲ್ಲಿ ಕೂಡಿಟ್ಟ ಪೊಲೀಸ್ ಪೇದೆ.

ಜನರಿಗೆ ನ್ಯಾಯ ಕೊಡಿಸಬೇಕಿದ್ದ ಮಹಿಳೆಯರ ರಕ್ಷಣೆ ಮಾಡಬೇಕಿದ್ದ ಮಹಿಳೆಯರ ರಕ್ಷಣೆ ಸದಾ ಸಿದ್ದರಿರಬೇಕಾಗಿದ್ದ ಪೊಲೀಸ್ ಸಿಬ್ಬಂದಿಯೇ ತನ್ನ ಹೆಂಡತಿಯ ಶೀಲ…

1 month ago

ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಾಮಗಾರಿ ಮಾಡಿದ ಬಿಲ್ ಮಾಡಿಕೊಡಲು ಗುತ್ತಿಗೆದಾರನ ಬಳಿ ಲಂಚ ಪಡೆಯುವಾಗ ಅಧಿಕಾರಿಗಳು ಲೋಕಾಯುಕ್ತ ಬಲೆಗೆ…

1 month ago

ಸಾಕು ತಂದೆಯಿಂದಲೇ ಭೀಕರ ಕೊಲೆಯಾದ ಇಬ್ಬರು ಹೆಣ್ಣು ಮಕ್ಕಳು.

ಬೆಂಗಳೂರಿನ ದಾಸರಹಳ್ಳಿಯಲ್ಲಿ ಸಾಕು ತಂದೆಯೊಬ್ಬ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ತಲೆಮೆರೆಸಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಈ ಭೀಕರ…

1 month ago

ಇನ್ನು ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿಸುವಂತಿಲ್ಲ: ಸಿಎಂ

ಕೃಷಿಕರಲ್ಲದವರಿಗೆ ಇನ್ನೂ ಕೃಷಿ ಭೂಮಿ ಸಿಗುವುದಿಲ್ಲ. ಬಿಜೆಪಿ ತಂದಿದ್ದ ಭೂ ಕಾಯ್ದೆ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ…

2 months ago

ಕಾಮ ಬಯಕೆ ಇದ್ದರೇ ‘ರೆಡ್ ಲೈಟ್ ಏರಿಯಾ’ಗೆ ಬನ್ನಿ, ಅತ್ಯಾಚಾರ ಮಾಡಬೇಡಿ: ಲೈಂಗಿಕ ಕಾರ್ಯಕರ್ತೆ

ಸೋನಾಗಾಚಿ ರೆಡ್ ಲೈಟ್ ಪ್ರದೇಶದ ಮಹಿಳೆಯೊಬ್ಬರು ಯುವ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯ ನಂತರ ಹೃದಯ ವಿದ್ರಾವಕ ಹೇಳಿಕೆಯೊಂದಿಗೆ…

2 months ago

ಶಾಲೆಯ ಮುಂದೆ ಇಲ್ಲ ಸ್ವಚ್ಛತೆ; ರೋಗಕ್ಕೆ ಆಹ್ವಾನ ನೀಡುತ್ತಿರುವ ಪಿಡಿಒ!

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಬಿಲಕೆರೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬಿಲಕೆರೂರ…

2 months ago