ಕುಂದಗೋಳ; ನೀರು ಜೀವಾಮೃತ. ಸಕಲ ಜೀವರಾಶಿಗಳಿಗೂ ಇದು ಜೀವಧಾರ. ಆದರೆ ಇಂದು ನೀರಿನ ಸಂರಕ್ಷಣೆ ಜೊತೆಗೆ ಕಾಪಾಡಿಕೊಳ್ಳುವುದು ಬಹುಮುಖ್ಯ. ಎಲ್ಲೆಡೆ ನೀರಿಗಾಗಿ ಹಾಹಾಕಾರ ಉಂಟಾಗುವ ಪರಿಸ್ಥಿತಿಯಲ್ಲಿ ಕೆರೆಗಳ ಸಂರಕ್ಷಣೆ ಮಾಡುವುದು ಆದ ಕರ್ತವ್ಯ.
ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೆರೆಗಳ ಸಂರಕ್ಷಣೆ ಜೊತೆಗೆ ಉತ್ತಮ ವಾತಾವರಣ, ನೈರ್ಮಲ್ಯ ಕಾಪಾಡುವುದು ಸ್ಥಳೀಯ ಆಡಳಿತ ಮಂಡಳಿ. .ಇದ್ಯಾವುದೂ ಮಾಡದೇ ನಮಗೂ ಇದಕ್ಕೂ ಸಂಬಂಧನೆ ಇಲ್ಲ ಎನ್ನುವುದು ದುರಷ್ಟಕರ ಸಂಗತಿ.
ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಪಂ ವ್ಯಾಪ್ತಿಯ ಕೂಡ್ಲಿವಾಡ ಗ್ರಾಮದಲ್ಲಿ ಕುಡಿಯುವ ನೀರಿನ ಕೆರೆಗೆ ಸವಲತ್ತುಗಳು ಇಲ್ಲದೆ ಬೀಕೋ ಎನ್ನುತ್ತಿದೆ. ಹೌದು..! ಕೆರೆ ಸುತ್ತಲೂ ನಿರ್ವಹಣೆ ಇಲ್ಲದೆ ಹಸಿ ಕಸ ಬೆಳೆದು ನಿಂತಿದೆ. ಇನ್ನೂ ಕೆರೆಗಳಿಗೆ ಜಾನುವಾರು ನುಗ್ಗಿ ಜೀವ ಕಳೆದುಕೊಂಡರೆ ಯಾರೂ ಹೊಣೆ? ಕೆರೆ ಪಾಟೂನಿಗೆ ಹತ್ತಿರ ಸಾರಾಯಿ ಪ್ಯಾಕೇಟ್ ಗಳು, ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳಿಂದ ಆವೃತವಾಗಿದೆ ಇಷ್ಟೆಲ್ಲಾ ಸಮಸ್ಯೆಗಳ ಜೊತೆಗೆ ರಾತ್ರಿ ಕುಡುಕರ ಹಾಟ್ ಸ್ಪಾಟ್ ವಾಯಿತ ಕೆರೆ ಅಂಗಳ ಅನ್ನುವುದು ಅಲ್ಲಿನ ಜನರ ಪ್ರಶ್ನೆಯಾಗಿದೆ.
ಈ ಕೂಡಲೇ ಇಲ್ಲಿನ ಸ್ಥಳೀಯ ಆಡಳಿತ ಮಂಡಳಿ ಅಧಿಕಾರಿಗಳು ಸಂರಕ್ಷಣೆ ಜೊತೆಗೆ ಅಭಿವೃದ್ಧಿ ಹತ್ತಿರ ಕೊಂಡೊಯ್ಯುವುತ್ತಾರ ಕಾದು ನೋಡಬೇಕು.
ವರದಿ; ಶಾನು ಯಲಿಗಾರ