ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಗೊಳಸಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮದ ದರ್ಗಾದ ಎದುರುಗಡೆ ಇರುವ ನೀರಿನ ಟ್ಯಾಂಕ್ ಮತ್ತು ದೋಬಿ ಗಾಟ್ ಹತ್ತಿರ ಚರಂಡಿಯೆಲ್ಲಾ ತುಂಬಿ ಕೊಳಚೆಯಿಂದ ಹಾಗೂ ದುರ್ವಾಸನೆಯಿಂದ ಆವೃತವಾಗಿ ಸುತ್ತ ಮುತ್ತ ಇರುವ ಸಾರ್ವಜನಿಕರಿಗೆ ತೊಂದರೆಯಾಗುತಿದ್ದು, ದಿನಾಲೂ ಸಾರ್ವಜನಿಕರು ಓಡಾಡುವ ದಾರಿ ಸಹ ಇದಾಗಿದ್ದು. ಮೂಗು ಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೂ ಸರ್ಕಾರಿ ದವಾಖಾನೆಯ ಎದುರಗಡೆ ಗಾಣದ ಬಾರಿ ಓಣಿಯಲ್ಲಿಯು ಸಹ ಕಸದಿಂದ ಆವೃತವಾಗಿದೆ. ಈ ಅವ್ಯವಸ್ಥೆಯಿಂದ ಗ್ರಾಮದ ಜನರಿಗೆ ಹಲವು ರೋಗಗಳ ಭೀತಿ ಎದುರಿಸುವ ಪರಿಸ್ಥಿತಿ ಉಂಟಾಗಿದೆ.ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ವಚ್ಚ ಗೊಳಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಸ್ವಚ್ಛತೆ ಬಗ್ಗೆ ಸರ್ಕಾರವು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿರುತ್ತದೆ. ಗೊಳಸಂಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಎಸ್ ಎಂ ಬಿರಾದಾರ ರವರು ಗಮನಹರಿಸದೇ ಇರುವುದು ಈ ಅವ್ಯವಸ್ಥೆಗೆ ಕಾರಣವಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ದಿವ್ಯ ನಿರ್ಲಕ್ಷ ವಹಿಸುತ್ತಿದ್ದು ಗ್ರಾಮದ ಜನರು ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ವರದಿ ಕಂಡ ಮೇಲೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಬೇಟಿ ಕೊಟ್ಟು ಗ್ರಾಮಸ್ಥರ ಈ ತೊಂದರೆಯನ್ನು ಬಗೆ ಹರಿಸುವರೋ ಇಲ್ಲವೋ ಕಾದು ನೋಡೋಣ.

ವರದಿ:ಸಂಗಪ್ಪ ಚಲವಾದಿ

error: Content is protected !!