ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಿಕ್ಕ ಕುರುವತ್ತಿ ಗ್ರಾಮ ಪಂಚಾಯಿತಿಗೆ ಸೇರಿರುವ ಚೌಡದಾನಪುರ ಗ್ರಾಮದ ಹೊನ್ನಮ್ಮ ದೇವಿ ಕಟ್ಟೆ ಸಮೀಪ ಚರಂಡಿಯ ನೀರು ರಸ್ತೆ ಮೇಲೆ ಹರಿದು ಗಬ್ಬೆದ್ದು ನಾರುತ್ತಿದೆ ಇದರಿಂದ ಸುತ್ತಮುತ್ತಲಿನ ಪರಿಸರವು ಸಹ ಹಾಳಾಗುತ್ತಿದ್ದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.
ಹೌದು, ಚೌಡದಾನಪುರ ಗ್ರಾಮವೆಂದರೆ ಅದೊಂದು ಐತಿಹಾಸಿಕ ಪ್ರಸಿದ್ಧ ಗ್ರಾಮ ಈಗ ಅದು ಕೆಲವೊಂದಿಷ್ಟು ಅವಿವೇಕಿಗಳಿಂದ ತನ್ನ ಸೌಂದರ್ಯವನ್ನೇ ಕಳೆದುಕೊಳ್ಳುತ್ತಿದೆ.
ಗ್ರಾಮ ಪಂಚಾಯಿತಿಯ ಅನುದಾನದಿಂದ ಚರಂಡಿ ನಿರ್ಮಿಸಲಾಗಿದ್ದರೂ ಸಹ ಆ ಚರಂಡಿಯಲ್ಲಿ ನೀರು ಹರಿದು ಹೋಗುತ್ತಿಲ್ಲ ಬದಲಾಗಿ ರಸ್ತೆಯ ಮೇಲೆ ನಿಂತು ಗಬ್ಬು ವಾಸನೆ ಬರುತ್ತಿದೆ.ಕ್ರಿಮಿಕೀಟಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗದ ಭೀತಿಯು ಸಹ ಕಾಡುತ್ತಿದೆ.
ಅಂದಹಾಗೆ ನೀರು ರಸ್ತೆ ಮೇಲೆ ನಿಲ್ಲೊದ್ಯಾಕೆ?ಅಲ್ಲೊಬ್ಬ ಅವಿವೇಕಿ ವ್ಯಕ್ತಿ ತನ್ನ ಹೊಲಕ್ಕೆ ಚರಂಡಿ ನೀರು ಹೋಗಲು ಚರಂಡಿಗೆ ಮಣ್ಣನ್ನು ಸುರಿದು ಹಾಕಿದ್ದಾನಂತೆ.ಅದೇನೇ ಇರಲಿ ಯಾರೇ ಆಗಿರಲಿ ಆತ ತನ್ನ ಗದ್ದೆಗೆ ಆ ನೀರನ್ನು ಹಾಯಿಸಲೇಬೇಕೆಂದರೆ ಬೇರೆ ವಿಧಾನವನ್ನು ಕಂಡುಕೊಳ್ಳಬೇಕು ಆದರೆ ಅದನ್ನು ಬಿಟ್ಟು ಪಂಚಾಯಿತಿ ಅನುದಾನದಲ್ಲಿ ನಿರ್ಮಿಸಲಾದ ಚರಂಡಿಗೆ ಮಣ್ಣು ಹಾಕಿ ಮುಚ್ಚಿ ಆ ನೀರನ್ನು ರಸ್ತೆಯಲ್ಲಿ ನಿಲ್ಲಿಸಿ, ರಸ್ತೆಯನ್ನು ಗಬ್ಬೆದ್ದು ನಾರುವಂತೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುವ ಅಗತ್ಯವೇನಿದೆ ಎಂದು ಸ್ಥಳೀಯ ನಿವಾಸಿಗಳ ಪ್ರಶ್ನೆಯಾಗಿದೆ.
ಏನೇ ಇರಲಿ ಇಷ್ಟೆಲ್ಲ ಅವಾಂತರಗಳು ನಡೆದರೂ ಕಂಡು ಕಾಣದಂತೆ ಸುಮ್ಮನಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಆ ವ್ಯಕ್ತಿಯ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ, ಚರಂಡಿಯನ್ನು ಸ್ವಚ್ಛಗೊಳಿಸಿ ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಬೇಕಿದೆ
ವರದಿ:ಮಂಜುನಾಥ ಹರಿಜನ.

1 thought on “ಚಿಕ್ಕ ಕುರುವತ್ತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೇ ಎಲ್ಲಿದ್ದೀರಿ? ಗ್ರಾಮದ ಸ್ವಚ್ಛತೆಯ ಬಗ್ಗೆ ನಿಮಗೆ ಕಾಳಜಿನೇ ಇಲ್ವಾ?

Comments are closed.

error: Content is protected !!