ಪತಿ ಕೊಡಲಿಯಿಂದ ಪತ್ನಿ ಹಾಗು ಪತ್ನಿ ಪ್ರಿಯಕರನನ್ನು ಕೊಚ್ಚಿ ಕೊಂದಿರುವ ಘಟನೆಯು ಮಧ್ಯಪ್ರದೇಶದ ದಾತಿಯಾ ಜಿಲ್ಲೆಯ ಖತಿ ಬಾಬಾ ಕಾಲೋನಿಯಲ್ಲಿ ನಡೆದಿದೆ. ಪ್ರಿಯಕರನೊಂದಿಗೆ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಪತಿಯೇ ಇಬ್ಬರನ್ನು ಕೊಲೆ ಮಾಡಿದ್ದಾನೆ. ಕೈಯಲ್ಲಿ ಕೊಡಲಿಯನ್ನು ಹಿಡಿದುಕೊಂಡೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಂದಿರುವುದಾಗಿ ಆರೋಪಿ ರವಿಯು ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.
ಖಾತಿ ಬಾಬಾ ಕಾಲೋನಿ ನಿವಾಸಿಯು ರವಿ ವಂಶಕರ್ ವೃತ್ತಿಯಲ್ಲಿ ಚಾಲಕನಾಗಿದ್ದನು. ಪತ್ನಿ ಪೂಜಾಳ ನಡವಳಿಕೆಯ ಬಗ್ಗೆ ಅನುಮಾನವಿದ್ದ ಕಾರಣ ಆಕೆಯ ಮೇಲೆ ಕಣ್ಣಿಟ್ಟಿದ್ದನು. ಹೀಗಿರುವಾಗ ಶುಕ್ರವಾರದಂದು ಆತನ ಪತ್ನಿ ಮಾರುಕಟ್ಟೆಯಿಂದ ತರಕಾರಿ ತರುವಂತೆ ಹೇಳಿದ್ದಾಳೆ. ಇತ್ತ ಪತ್ನಿಯು ಇಲ್ಲದ್ದನ್ನು ನೋಡಿ ಪೂಜಾ ತನ್ನ ಪ್ರಿಯಕರ ರವಿಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದಾನೆ. ಆದರೆ ತರಕಾರಿ ತರಲು ಮಾರುಕಟ್ಟೆಗೆ ಹೋಗಿದ್ದ ಗಂಡನಿಗೆ ಪೂಜಾಳ ಮೇಲೆ ಅನುಮಾನವಿದ್ದ ಕಾರಣ ಅರ್ಧ ದಾರಿಯಿಂದಲೇ ಮನೆಗೆ ವಾಪಾಸ್ಸಾಗಿದ್ದಾನೆ. ಆದರೆ ಪತಿ ರವಿಯು ಮನೆಗೆ ಹಿಂದಿರುಗಿದಾಗ ಪೂಜಾಳು ಪ್ರಿಯಕರನ ಜೊತೆಗೆ ಕೋಣೆಯಲ್ಲಿರುವುದನ್ನು ಕಂಡಿದ್ದಾನೆ. ಇದನ್ನು ಕಣ್ಣಾರೆ ಕಂಡ ಕೋಪದಿಂದ ಪತ್ನಿ ಪೂಜಾಳ ಬಳಿ ಬಾಗಿಲು ತೆರೆಯುವಂತೆ ಹೇಳಿದ್ದಾನೆ. ಆದರೆ ಹೆಂಡತಿ ಬಾಗಿಲು ತೆರೆಯದ ಕಾರಣ ರವಿಯ ಕೋಪವು ನೆತ್ತಿಗೇರಿದೆ.
ಮನೆಯ ಅಂಗಳದಲ್ಲಿಯೇ ಇದ್ದ ಕೊಡಲಿಯನ್ನು ಎತ್ತಿಕೊಂಡು ಜೋರಾಗಿ ಕೂಗಾಡಲು ಆರಂಭಿಸಿದ್ದಾನೆ. ಆ ಬಳಿಕ ಪೂಜಾಳ ಪ್ರಿಯಕರ ಬಾಗಿಲು ತೆರೆದಾಗ ರವಿ ಕೊಡಲಿಯಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾನೆ. ಇತ್ತ ಪತ್ನಿ ಪೂಜಾಳ ತಪ್ಪಿಸಿಕೊಂಡು ಮನೆಯಿಂದ ಹೊರಗೆ ಬಂದಿದ್ದು, ಕೊಡಲಿಯಿಂದ ಆಕೆಯ ಕತ್ತು ಕಡಿದಿದ್ದಾನೆ. ಇಬ್ಬರೂ ಮನೆಯ ಅಂಗಳದಲ್ಲಿ ವಿಲವಿಲ ಒದ್ದಾಡಿ ಪ್ರಾಣಬಿಟ್ಟಿದ್ದಾರೆ.
ರವಿ ರಕ್ತದಿಂದ ಕೂಡಿದ ಬಟ್ಟೆಯಲ್ಲೇ ಕೈಯಲ್ಲಿ ಕೊಡಲಿಯನ್ನು ಹಿಡಿದು ಪೊಲೀಸ್ ಠಾಣೆಯ ಮೆಟ್ಟಿಲೇರಿ ತಾನು ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ್ದೇನೆ ಎಂದು ತಿಳಿಸುತ್ತಿದ್ದಂತೆ ಗಾಬರಿಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಕ್ಷಣವೇ ಪೊಲೀಸರ ತಂಡವು ಆತನ ಮನೆಗೆ ತೆರಳಿ ಮನೆಯ ಅಂಗಳದಲ್ಲಿ ಬಿದ್ದಿದ್ದ ಎರಡೂ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು ಆರೋಪಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ.