ಹುನಗುಂದ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕಮತಗಿ ಕ್ರಾಸ್ ಬಳಿ ಕೆಲವು ವಾರಗಳ ಹಿಂದೆ ಅಪಘಾತವಾಗಿದ್ದು ಅಪಘಾತದಲ್ಲಿ ಪ್ರವೀಣ್ ಸಾಬಣ್ಣನವರ್ ಎಂಬುವವರು ಮೃತಪಟ್ಟಿದ್ದರು. ಮೇಲ್ನೋಟಕ್ಕೆ ಇದು ಅಪಘಾತದ ರೀತಿಯಲ್ಲಿ ಕಂಡುಬಂದರೂ ಪೊಲೀಸರ ವಿಚಾರಣೆಯ ಬಳಿಕ ಕೊಲೆ ಎಂದು ಸಾಬೀತಾಗುವುದಲ್ಲದೆ ಅಚ್ಚರಿಯ ವಿಚಾರವೊಂದು ಹೊರಬಿದ್ದಿದೆ.
ಸಾವನ್ನಪ್ಪಿರುವ ಪ್ರವೀಣ್ ಹಾಗೂ ನಿತ್ಯ ಎಂಬಾಕೆಯು ಪ್ರೀತಿಸಿ ವಿವಾಹವಾಗಿರುತ್ತಾರೆ. ಆದರೆ ನಿತ್ಯ ಮದುವೆಯ ಬಳಿಕ ರಾಘವೇಂದ್ರ ಎಂಬಾತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುತ್ತಾಳೆ. ಇವಳ ಅನೈತಿಕ ಸಂಬಂಧಕ್ಕೆ ಈಕೆಯ ಗಂಡ ಮುಳುವಾಗಬಾರದು ಎಂದು ಆಲೋಚಿಸಿ ಪ್ರಿಯಕರನೊಂದಿಗೆ ಸೇರಿ ಉಪಾಯ ಮಾಡಿ ಬೈಕ್ ನಲ್ಲಿ ಚಲಿಸುತ್ತಿದ್ದಂತಹ ಪ್ರವೀಣನಿಗೆ ನಿತ್ಯ ಹಾಗೂ ರಾಘವೇಂದ್ರ ಕಾರಿನಲ್ಲಿ ಬಂದು ಗುದ್ದಿದ್ದಾರೆ. ಪ್ರವೀಣನ ಬೈಕಿಗೆ ಗುದ್ದಿದ ನಂತರ ಸ್ಥಳದಿಂದ ಪರಾರಿಯಾಗುತ್ತಿದ್ದ ನಿತ್ಯಾಗೆ ಪ್ರವೀಣನೇ ಕರೆ ಮಾಡಿ ನನಗೆ ಆಘಾತವಾಗಿದೆ ನನ್ನನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಕಾಪಾಡು ಎಂದು ಕೇಳಿಕೊಂಡಿದ್ದಾನೆ. ಆದರೆ ಈ ಐನಾತಿ ಹೆಂಡ್ತಿ ನಿತ್ಯ ಪುನಃ ಕಾರಿನಲ್ಲಿ ಹಿಂದೆ ಬಂದು ಪ್ರವೀಣನ ಮೇಲೆ ಕಾರು ಹತ್ತಿಸಿ ಮೃತ ಪಡುವಂತೆ ಮಾಡಿದ್ದಾಳೆ. ಈ ಎಲ್ಲಾ ವಿಚಾರವೂ ಪೋಲಿಸರ ತನಿಖೆಯ ಬಳಿಕ ಬೆಳಕಿಗೆ ಬಂದಿದು ಅನೈತಿಕ ಸಂಬಂಧಕ್ಕಾಗಿ ಗಂಡನನ್ನು ಬಲಿತೆಗೆದುಕೊಂಡ ನಿತ್ಯ ಹಾಗೂ ಆಕೆಯ ಪ್ರಿಯಕರ ರಾಘವೇಂದ್ರ ಈಗ ಪೊಲೀಸರ ಅತಿಥಿಯಾಗಿದ್ದಾರೆ.