
ಅರಸೀಕೆರೆ ರೈಲ್ವೆ ಪೊಲೀಸರು ತೀವ್ರ ತನಿಖೆ ನಡೆಸಿ, ರೈಲು ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ಬಳಿಕ ಹತ್ಯೆ ಮಾಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮೌಸಮ್ ಪಹಡಿ (25), ಕೂಲಿ ಕೆಲಸ ಮಾಡುತ್ತಿದ್ದ ಈತ, ಮಹಿಳೆಯ ಕೊಲೆಯಲ್ಲಿ ಪ್ರಮುಖ ಆರೋಪಿಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಘಟನೆ ವಿವರ
- ಫೆಬ್ರವರಿ 13ರಂದು ಬೆಳಗ್ಗೆ, ಸಕಲೇಶಪುರ ಕಡೆ ಯಾರ್ಡ್‌ನ ಟವರ್ ವ್ಯಾಗನ್ ಶೆಡ್ ಬಳಿ, ಸುಮಾರು 40 ವರ್ಷದ ಅಪರಿಚಿತ ಮಹಿಳೆ ದಾರుణವಾಗಿ ಹತ್ಯೆಗೀಡಾಗಿದ್ದರು.
- ಆರೋಪಿ ಮಹಿಳೆಯ ತಲೆಯ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಿದ್ದ ಎಂದು ತಿಳಿದು ಬಂದಿದೆ.
- ನಿರ್ಮಾಣ ಹಂತದಲ್ಲಿದ್ದ ಆಯಿಲ್ & ಪೆಟ್ರೋಲ್ ಗೋದಾಮಿನ ರೂಮಿನಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು.
- ಈ ಕುರಿತು ಸಿವಿಲ್ ಇಂಜಿನಿಯರ್ ಪವನ್ C.M. ರೈಲ್ವೆ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಪೊಲೀಸರ ಕಾರ್ಯಾಚರಣೆ
ಬೆಂಗಳೂರು ರೈಲ್ವೇ ಎಸ್‌ಪಿ ಡಾ. ಸೌಮ್ಯಲತಾ ಮಾರ್ಗದರ್ಶನದಲ್ಲಿ, ರೈಲ್ವೆ ಉಪ ವಿಭಾಗದ ಡಿ.ಎಸ್.ಪಿ. ಆರ್. ಸತೀಶ್ ಕುಮಾರ್ ಮೇಲ್ವಿಚಾರಣೆಯಲ್ಲಿ, ಮೈಸೂರು ರೈಲ್ವೆ ವೃತ್ತದ ಇನ್ಸ್‌ಪೆಕ್ಟರ್ ಚೇತನ್. ವಿ. ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ಮುಂದುವರಿಸಿ ಆರೋಪಿಯನ್ನು ಪತ್ತೆ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿದೆ.