ಬೆಳಗಾವಿ ಜಿಲ್ಲೆಯ ಬೈರನಟ್ಟಿ ಗ್ರಾಮದಲ್ಲಿ ಬ್ಯಾಂಕ್ ಸಿಬ್ಬಂದಿಗಳ ಕಿರುಕುಳಕ್ಕೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.  ಪಾರ್ವತೆಮ್ಮ ಸೋಮಪ್ಪ ಮುತ್ನಾಳ ಎಂಬ 50 ವರ್ಷದ ಮಹಿಳೆ ಮಗನಾದ ದೇಮಪ್ಪ ಖಾಸಗಿ ಬ್ಯಾಂಕ್ ಮುಚ್ಚಂಡಿಯಿಂದ ಎಮ್ಮೆಯ ಮೇಲೆ ಸಾಲವನ್ನು ತೆಗೆದುಕೊಂಡಿದು. ಇಲ್ಲಿಯವರೆಗೂ ಕಂತುಗಳನ್ನು ಕಟ್ಟುತ್ತಾ ಬಂದಿದ. ಈ ತಿಂಗಳು ಅಂದರೆ ಫೆಬ್ರುವರಿ ತಿಂಗಳ ಕಂತು ಕಟ್ಟುವುದು ತಡವಾದರಿಂದ ದಿನಾಂಕ 15/02/2024 ರ ಬೆಳಿಗ್ಗೆ 10 ಘಂಟೆ ಸುಮಾರಿಗೆ ಖಾಸಗಿ ಬ್ಯಾಂಕ್ ಸಿಬ್ಬಂದಿಯಾದ ಸೋಮು ಕಿರಗಾವ ಹಾಗೂ ಹೆಸರು ಗೊತ್ತಿರದ ಇನ್ನೊಬ್ಬ ಸಿಬ್ಬಂದಿ, ಇಬ್ಬರು ಪದೇ ಪದೇ ಮನೆಗೆ ಬಂದು ಒಬ್ಬಳೇ ಇದ್ದಾಗ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಮಹಿಳೆ ಆರೋಪಿಸಿರುತ್ತಾರೆ.
ಮರ್ಯಾದೆಗೆ ಹೆದರಿ, ಬೈಯಬೇಡಿ ನಾನು ಏನಾದರೂ ಕುಡಿದು ಸಾಯ್ತೀನಿ ನೋಡಿ  ಎಂದಾಗ ಬ್ಯಾಂಕಿನ ಸಿಬ್ಬಂದಿ ನೀನು ವಿಷ ಕುಡಿದು ಸಾಯಿ ಆಗ ನಿನ್ನ ಮಗ ಬರುತ್ತಾನಲ್ಲ ಅವ ಬಂದ ಮೇಲೆ ಸಾಲ ವಸೂಲಿ ಮಾಡುತ್ತೇವೆ ಎಂದು ವಿಷ ಕುಡಿಯಲು ಬ್ಯಾಂಕ್ನ ಸಿಬ್ಬಂದಿಯೇ ಪ್ರಚೋದಿಸಿರುತ್ತಾನೆ ಎಂದು ಮಹಿಳೆ ಆರೋಪಿಸಿರುತ್ತಾರೆ.
ಮಹಿಳೆಯು ವಿಷ ಸೇವಿಸಿದ್ದು ಸ್ಥಳದಿಂದ ಬ್ಯಾಂಕ್ ನ ಸಿಬ್ಬಂದಿಗಳು ಪರಾರಿಯಾಗಿರುತ್ತಾರೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು ನೇಸರಗಿ ಠಾಣ ಪೊಲೀಸರು ದೂರನ್ನು ದಾಖಲಿಸಿಕೊಂಡಿರುತ್ತಾರೆ.

ವರದಿ: ಸಂಗಪ್ಪ ಚಲವಾದಿ

 

error: Content is protected !!