ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರಿಗೆ ಶೌಚಾಲಯವಿಲ್ಲ ಹಾಗೂ ಸರಿಯಾದ ರೀತಿಯ ರಸ್ತೆಗಳಿಲ್ಲ ಮತ್ತು ನೀರು 15 ದಿನಕ್ಕೊಮ್ಮೆ ಮಾತ್ರ ಬಿಡುತ್ತಾರಂತೆ. ಮಹಿಳೆಯರು ಮುಂಜಾನೆ ಶೌಚಾಕ್ಕೆ ಹೋಗಲು ಚಂಬು ಹಿಡಿದು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂತಹ ಸಂದರ್ಭದಲ್ಲಿ ಮಹಿಳೆಯರು ಅದೇ ಸ್ಥಳದಲ್ಲಿ ಚಂಬು ಹಿಡಿದು ನಿಂತು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ನಾವು ತಮ್ಮ ಬಳಿ ಹಣ ಕೇಳುತ್ತಿಲ್ಲ ಸರಿಯಾದ ರೀತಿಯಲ್ಲಿ ಗ್ರಾಮದ ಉದ್ಧಾರ ಮಾಡಿ ಶೌಚಾಲಯಕ್ಕೆ ತಿಪ್ಪೆಗೆ ಬರುವಂತಹ ಪರಿಸ್ಥಿತಿ ಇದೆ. ಇದನ್ನು ಸರಿಪಡಿಸಿ ಎಂದು ಕೇಳಿಕೊಂಡಿದ್ದಾರೆ. ಹಾಗೂ ಇದನ್ನು ಸರಿಪಡಿಸದಿದ್ದರೆ ಮುಂದಿನ ಬಾರಿ ಚುನಾವಣೆಯಲ್ಲಿ ಮತ ಕೇಳಲು ಬನ್ನಿ ತಮಗೆ ಇದೆ ಎಂದು ಎಚ್ಚರಿಕೆಯನ್ನು ಸಹ ನೀಡಿದ್ದಾರೆ.
ವರದಿ: ವೆಂಕಾರೆಡ್ಡಿ