
ಯಾದಗಿರಿ ಜಿಲ್ಲೆ ಗುರುಮಿಟ್ಕಲ್ ತಾಲೂಕು ಸೈದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿಂದಿ ಆಯುವ ಯುವತಿಯರಿಬ್ಬರ ಶವ ನೀಲಹಳ್ಳಿ ಕೆರೆಯಲ್ಲಿ ದಿನಾಂಕ 11.02.2025 ರಂದು ದೊರೆತಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಮೃತ ಯುವತಿಯರು ಬುಡ್ಗಜಂಗಮ ಸಮುದಾಯದ ಸಾಯಮ್ಮ(15) ಮತ್ತು ಶ್ಯಾಮಮ್ಮ (19) ಎಂದು ಗುರುತಿಸಲಾಗಿದೆ.
ಕುಟುಂಬಸ್ಥರಿಂದ ಅತ್ಯಾಚಾರ ಮತ್ತು ಕೊಲೆಯ ಆರೋಪ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಟುಂಬಸ್ಥರು ಅತ್ಯಾಚಾರ ಮತ್ತು ಕೊಲೆ ಎಂದು ಆರೋಪಿಸಿದ್ದು ಈ ಆರೋಪಕ್ಕೆ ಪುಷ್ಟಿ ಕೊಡುವಂತೆ ಯುವತಿಯರ ಬಳಿ ಸಿಕ್ಕ ದೂರವಾಣಿ ಸಂಖ್ಯೆಗಳು, ಹಾಗೂ ಯಾರೋ ಅವರನ್ನು ಬೈಕ್ ನಲ್ಲಿ ಕರೆದುಕೊಂಡು ಹೋದರು ಎಂಬ ಹೇಳಿಕೆಗಳನ್ನು ಸ್ಥಳೀಯರು ನೀಡಿರುತ್ತಾರೆ.
ದಲಿತ ಪರ ಸಂಘಗಳಿಂದ ಪ್ರತಿಭಟನೆ.
ಈ ವಿಚಾರದ ಕುರಿತು ಕೆಲ ದಲಿತ ಪರ ಸಂಘಗಳು ತನಿಖೆ ನಡೆಸಿ ಆದಷ್ಟು ಬೇಗ ಅಪರಾಧಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿರುತ್ತಾರೆ. ಅಷ್ಟೇ ಅಲ್ಲದೆ ದಿನಾಂಕ 25.02.2025 ರಂದು ಬೆಂಗಳೂರು ಹಾಗೂ ಕಲಬುರ್ಗಿಯಲ್ಲೂ ಸಹ ದಲಿತಪರ ಸಂಘಗಳು ಪ್ರತಿಭಟನೆ ನಡೆಸಿರುತ್ತಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವಡ್ಡಗೆರೆ ನಾಗರಾಜಯ್ಯ ಹಾಗೂ ಹಲವರು ಸೇರಿ ಪ್ರತಿಭಟನೆ ನಡೆಸಿದ್ದು ಚಿಂದಿ ಆಯುವ ಅಲೆಮಾರಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ವ್ಯಾಸಗಿ ಕೊಲೆ ಮಾಡಿರುವವರನ್ನು ಬಂಧಿಸಿ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಒತಾಯಿಸಿರುತ್ತಾರೆ.
ಪೊಲೀಸರ ಹೇಳಿಕೆ.
ಕೆರೆಯಲ್ಲಿ ಸಿಕ್ಕಿರುವ ಯುವತಿಯರ ಶವದ ಪ್ರಕರಣದ ಕುರಿತು ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು ತನಿಖೆ ನಡೆಸುತ್ತಿದ್ದೇವೆ ಈಗಲೇ ಹೆಚ್ಚಿನ ಮಾಹಿತಿಯನ್ನು ಒದಗಿಸಲು ಸಾಧ್ಯವಿಲ್ಲ ಎಫ್ ಎಸ್ ಎಲ್ ವರದಿಗಾಗಿ ನಿರೀಕ್ಷಿಸುತ್ತಿದ್ದೇವೆ ಅದು ಬಂದ ನಂತರ ಖಚಿತ ಮಾಹಿತಿಯನ್ನು ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿರುತ್ತಾರೆ.