ಪ್ರಶ್ನೆ ಕೇಳಿದ್ದಕ್ಕೆ ಆಟೋ ಚಾಲಕರು ಅಲ್ಲೇ ನಡೆಸಿದ್ದಾರೆ ಎಂದು ಮಹಿಳಾ ಯೂಟ್ಯೂಬರ್ ಠಾಣೆಗೆ ದೂರು ನೀಡಿದ್ದು, ಇದಕ್ಕೆ ಪ್ರತಿ ದೂರಾಗಿ ಆಟೋ ಚಾಲಕರು ಕಳೆದ ಕೆಲವು ತಿಂಗಳುಗಳಿಂದ ಮಹಿಳಾ ಯೂಟ್ಯೂಬರ್ ಮತ್ತು ಆಕೆಯ ತಂಡ ಶಾಲಾ ಮತ್ತು ಕಾಲೇಜಿನ ಮಕ್ಕಳ ಬಳಿ ಡಬಲ್ ಮೀನಿಂಗ್ ಹೊಂದಿರುವ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದರು. ಉದಾಹರಣೆಗೆ ಮೇಲೆ ಅಥವಾ ಕೆಳಗೆ ಯಾವ ರೀತಿ ಮಲಗುವುದು ಉತ್ತಮ? ಮುಟ್ಟಿನ ಸಂದರ್ಭದಲ್ಲಿ ಕಾಲೇಜು ಮತ್ತು ಮದುವೆಗೆ ಹೋಗಬಹುದಾದರೆ, ದೇವಸ್ಥಾನಕ್ಕೆ ಯಾಕೆ ಹೋಗಬಾರದು? ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ವಿಚಾರವನ್ನು ಸ್ಥಳೀಯರು ನಮ್ಮ ಗಮನಕ್ಕೆ ತಂದರು. ನಂತರ, ನಾವುಗಳು ಅದನ್ನು ಪ್ರಶ್ನಿಸಲು ಮುಂದಾದರೆ ಆ ಮಹಿಳೆಯು ಅವಾಚ್ಯ ಶಬ್ದಗಳಿಂದ ನಿಂದಿಸಿ ಮರ್ಯಾದೆ ಕೊಡದಂತೆ ಮಾತನಾಡಿ ಕೋಪದಿಂದ ಕೆಟ್ಟದಾಗಿ ವರ್ತಿಸಿ ಬೈದಿದ್ದಾರೆ ಎಂದು ಪ್ರತಿದೂರು ನೀಡಿರುತ್ತಾರೆ.
ಸದ್ಯ ಈ ಘಟನೆಯಲ್ಲಿ ದೂರಿಗೆ ಪ್ರತಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.